ಹಿಂದೂ ಧರ್ಮದ ಚಾಂದ್ರಮಾನ ಪಂಚಾಂಗದ ಎಳನೇ ಮಾಸ. ಆಡು ಭಾಷೆಯಲ್ಲಿ ಆಶ್ವೀಜ ಎಂದೂ ಕರೆಯಲಾಗುತ್ತದೆ. ಶರತ್ ಋತುವಿನ ಮೊದಲ ಮಾಸ ಆಶ್ವಯುಜ ಮಾಸ. == ಈ ಮಾಸದ ಪ್ರಮುಖ ಹಬ್ಬಗಳು == ನವರಾತ್ರಿ (ಶುಕ್ಲ ಪಾಡ್ಯ- ನವಮಿ) ಸರಸ್ವತಿ ಹಬ್ಬ (ಶುಕ್ಲ ಸಪ್ತಮಿ) ಮಹಾನವಮಿ, ಆಯುಧ ಪೂಜೆ (ಶುಕ್ಲ ನವಮಿ) ವಿಜಯದಶಮಿ (ಶುಕ್ಲ ದಶಮಿ) ಪಾಶಾಂಕುಶಾ ಏಕಾದಶಿ (ಶುಕ್ಲ ಏಕಾದಶಿ) ಶರತ್ ಪೂರ್ಣಿಮ; ಕೋಜಾಗರ ವ್ರತ; ಕಾರ್ತಿಕ ಸ್ನಾನಾರಾಂಭ (ಹುಣ್ಣಿಮೆ) ರಮಾ ಏಕಾದಶಿ (ಕೃಷ್ಣ ಏಕಾದಶಿ) ಧನ ತ್ರಯೋದಶಿ (ಕೃಷ್ಣ ತ್ರಯೋದಶಿ) ಜಲಪೂರ್ಣ ತ್ರಯೊದಶಿ (ಕೃಷ್ಣ ತ್ರಯೊದಶಿ) ನರಕ ಚತುರ್ದಶಿ, ಯಮ ತರ್ಪಣ (ಕೃಷ್ಣ ಚತುರ್ದಶಿ) ದೀಪಾವಳಿ ಅಮಾವಾಸ್ಯೆ (ಅಮಾವಾಸ್ಯೆ) == ಈ ಮಾಸದಲ್ಲಿ ಜರುಗುವ ವಿವಿಧ ಉತ್ಸವ ಅಥವಾ ಜಾತ್ರೆಗಳು == ಶ್ರೀ ಚಾಮುಂಡೇಶ್ವರಿ ವರ್ಧ0ತಿ ಉತ್ಸವ - ಆಷಾಡ ಮಾಸ ಕೃಷ್ಣಪಕ್ಷ ಸಪ್ತಮಿ ರೇವತಿ ನಕ್ಷತ್ರದ ದಿವಸ. ಶ್ರೀ ಚಾಮುಂಡೇಶ್ವರಿ ಶಯನೋತ್ಸವ - ಆಶ್ವಯುಜ ಕೃಷ್ಣಪಕ್ಷ ತೃತೀಯಾ ದಿವಸ. ಶ್ರೀ ಚಾಮುಂಡೇಶ್ವರಿ ಮುಡಿ ಉತ್ಸವ - ಅಶ್ವಯುಜ ಕೃಷ್ಣಪಕ್ಷ ಪಂಚಮಿ ದಿವಸ. ಶ್ರೀ ಚಾಮುಂಡೇಶ್ವರಿ ವಸಂತೋತ್ಸವ - ಚೈತ್ರಶುಕ್ಲ ಪಾಡ್ಯದ ದಿವಸ. ಶ್ರಿ ಚಾಮುಂಡೇಶ್ವರಿ ಶರನ್ನವರಾತ್ರಿ ಉತ್ಸವಗಳು - ಆಶ್ವಯುಜ ಶುಕ್ಲ ಪಾಡ್ಯದ ದಿನದಿಂದ ದಶಮಿ ದಿನದವರೆಗೆ. ಶ್ರೀ ಚಾಮುಂಡೇಶ್ವರಿ ಕೈತ್ತಿಕೋತ್ಸವ - ಕಾರ್ತೀಕಮಾಸ ಪೂರ್ಣಮಿ ದಿವಸ. ಶ್ರೀ ಚಾಮುಂಡೇಶ್ವರಿ ಕೊಠಾರೋತ್ಸವ - ಪುಷ್ಯಮಾಸದಲ್ಲಿ ೪ನೇ ದಿನಾಂಕದಿಂದ . ಶ್ರೀ ಚಾಮುಂಡೇಶ್ವರಿ (ಜಾತ್ರೆ) ರಥೋತ್ಸವ - ಆಶ್ವಯುಜ ಮಾಸ ಪೂರ್ಣಿಮೆ ಉತ್ತರಾ ನಕ್ಷತ್ರ. ತೆಪ್ಪೋತ್ಸವ - ಆಶ್ವಯುಜ ಕೃಷ್ಣಪಕ್ಷ ದ್ವಿತೀಯಾ ದಿವಸ. ಶ್ರೀ ಮಹಾಬಲೇಶ್ವರಸ್ವಾಮಿ ರಥೋತ್ಸವ - ಪಾಲ್ಗುಣ ಕ್ರಷ್ಣ ಷಷ್ಟಿ ದಿವಸ. ಉತ್ತನಹಳ್ಳಿ ಜ್ವಾಲಾಮುಖಿ ಅಮ್ಮನವರ ಜಾತ್ರೆ - ಮಾಘಮಾಸದ ೩ನೇ ಭಾನುವಾರ.